10ನೇ ತರಗತಿ ಅಭ್ಯಾಸ ಹಾಳೆ-2 | ಸಮಾಜ ವಿಜ್ಞಾನ | ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ |
ಅಭ್ಯಾಸ ಹಾಳೆ 2
ಬ್ರಿಟಿಷ್ ಆಳ್ವಿಕೆ ವಿಸ್ತರಣೆ
I ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ:
1) ಮೊದಲನೆಯ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ __ ಒಪ್ಪಂದವಾಯಿತು ಆಯಿತು.
ಉತ್ತರ: ಸಾಲ್ ಬಾಯ್
2) ಮರಾಠರ ಕೊನೆಯ ಪೇಶ್ವೆ __
ಉತ್ತರ: ಎರಡನೇ ಬಾಜಿರಾಯ
3) ಎರಡನೇ ಆಂಗ್ಲೋ ಮರಾಠ ಯುದ್ಧವು ___ ಒಪ್ಪಂದದಿಂದ ಮುಕ್ತಾಯವಾಯಿತು.
ಉತ್ತರ: ಬೆಸ್ಸಿನ್
4) ನಿರಂತರ ಮೈತ್ರಿ ಒಪ್ಪಂದವನ್ನು ಬ್ರಿಟಿಷರು ಉಲ್ಲಂಘಿಸಿದ ವರ್ಷ __
ಉತ್ತರ: 1845 ಡಿಸೆಂಬರ್ (1809 ರಲ್ಲಿ ನಿರಂತರ ಮೈತ್ರಿ ಒಪ್ಪಂದ ವಾಗಿತ್ತು)
5) ಬ್ರಿಟಿಷರು ___ ನನ್ನು ಸತಾರದಲ್ಲಿ ಮರಾಠ ಮುಖಂಡನಾಗಿ ಪ್ರತಿಷ್ಠಾಪಿಸಿದರು.
ಉತ್ತರ : ಪ್ರತಾಪ್ ಸಿಂಹ
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1) ಮೊದಲ ಆಂಗ್ಲೋ ಮರಾಠ ಯುದ್ಧ ದ ನಂತರ ಮರಾಠರ ಪೇಶ್ವೆ ಯಾಗಿ ನೇಮಕಗೊಂಡವರು ಯಾರು?
ಉತ್ತರ : ಎರಡನೇ ಮಾಧವರಾವ್
2) ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಮುಖ್ಯ ಕಾರಣವೇನು?
ಉತ್ತರ : ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಮುಖ್ಯ ಕಾರಣ.
3) ಎರಡನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉತ್ತರ : ಬೆಸ್ಸಿನ್ ಒಪ್ಪಂದ
4) ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಿಂದ ವಿಲೀನಗೊಳಿಸಿ ಕೊಂಡವರು ಯಾರು?
ಉತ್ತರ : ಲಾರ್ಡ್ ಡಾಲ್ ಹೌಸಿ
5) ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು?
ಉತ್ತರ : ಲಾಹೋರ್ ಒಪ್ಪಂದ (1846)
6) ಲಾಹೋರ್ ಮತ್ತು ಮುಲ್ತಾನ ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಯಾರು?
ಉತ್ತರ: ಲಾಹೋರ್ ನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದವರು ಚಟಾರ್ ಸಿಂಗ್ ಅಟ್ಟಾರಿ ವಾಲ;
ಮುಲ್ತಾನ ನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದವರು ಮೂಲರಾಜ್.
No comments:
Post a Comment