ಭಾರತ ಸಂವಿಧಾನದ ಪ್ರಸ್ತಾವನೆ| ಭಾರತ ಸಂವಿಧಾನದ ಪೂರ್ವ ಪೀಠಿಕೆ|

ಭಾರತ ಸಂವಿಧಾನದ ಪ್ರಸ್ತಾವನೆ| ಭಾರತ ಸಂವಿಧಾನದ ಪೂರ್ವ ಪೀಠಿಕೆ|

ನಮ್ಮ ಸಂವಿಧಾನ

-:ಭಾರತ ಸಂವಿಧಾನದ ಪ್ರಸ್ತಾವನೆ:- 

(ಪೂರ್ವ ಪೀಠಿಕೆ)

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಪರಮಾಧಿಕಾರದ, ಸಮಾಜವಾದಿ

(*ಸಮಾಜವಾದಿ, ಸರ್ವಧರ್ಮ ಸಮಭಾವನೆ ಪದಗಳನ್ನು 1976ರ 42ನೇ ತಿದ್ದುಪಡಿಯಂತೆ ಸೇರ್ಪಡಿಸಲಾಗಿದೆ)

ಸರ್ವಧರ್ಮ ಸಮನ್ವಯ (ಜಾತ್ಯಾತೀತ) ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಹಾಗೂ ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಹಾಗೂ

ವಿಚಾರ, ಅಭಿವ್ಯಕ್ತಿ, ವಿಶ್ವಾಸ ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ;

ಸ್ಥಾನಮಾನ ಮತ್ತು ಅವಕಾಶ ಹಾಗೂ ಸಮಾನತೆ ಹಾಗೂ ಅಖಂಡತೆಯನ್ನು ಮೂಡಿಸಿ ಎಲ್ಲರಲ್ಲಿಯೂ

ಭಾತೃತ್ವ ಭಾವನೆಯನ್ನು ಬೆಳಗುವಂತೆ ಶ್ರದ್ಧಾಪೂರ್ವಕವಾದ ದೃಢಸಂಕಲ್ಪ ಮಾಡಿದವರಾಗಿ;

ನಮ್ಮ ಸಂವಿಧಾನ ಸಭೆಯಲ್ಲಿ ದಿನಾಂಕ 26, ನವೆಂಬರ್‌ 1949ನೆಯ ದಿನದಂದು,

ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...