ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಯಾವಾಗ ಅಂಗೀಕರಿಸಲ್ಪಟ್ಟಿತು?

ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಯಾವಾಗ ಅಂಗೀಕರಿಸಲ್ಪಟ್ಟಿತು?

1) ಡಿಸೆಂಬರ್ 13, 1946

2) ಜನವರಿ 22, 1947

3) ಡಿಸೆಂಬರ್ 11, 1946

4) ಡಿಸೆಂಬರ್ 9, 1946

ಸಂವಿಧಾನದ ಪ್ರಸ್ತಾವನೆ (ಪೂರ್ವ ಪೀಠಿಕೆ)

ಭಾರತ ಸಂವಿಧಾನವು ತನ್ನದೇ ಆದ ಪ್ರಸ್ತಾವನೆ ಹೊಂದಿದ್ದು, 

ಈ ಪ್ರಸ್ತಾವನೆ ಸಂವಿಧಾನದ ಸಂವಿಧಾನ, ರಚನಾಕಾರರ ವಿಚಾರಧಾರೆಗಳನ್ನು ಒಳಗೊಂಡಿದೆ. 

ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ಧಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆ ಆಗಿದೆ.

ಇದು ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶ ತತ್ವವಾಗಿದೆ.

ಈ ಪ್ರಸ್ತಾವನೆಯು ಡಿಸೆಂಬರ್ 13, 1946 ರಂದು ಜವಹಾರ ಲಾಲ್ ನೆಹರುರವರು ಮಂಡಿಸಿದ 'ಧ್ಯೇಯಗಳ ನಿರ್ಣಯ' (Objective Resolution) ವಾಗಿದೆ.

ಈ 'ಧ್ಯೇಯಗಳ ನಿರ್ಣಯ' (Objective Resolution) ವನ್ನು ಸಂವಿಧಾನ ರಚನಾ ಸಭೆ ಜನವರಿ 22, 1947ರಂದು ಅಂಗೀಕರಿಸಿತು.

ಈ ನಿರ್ಣಯವು ಭಾರತದ ಸ್ವಾತಂತ್ರ್ಯ, ಗಣರಾಜ್ಯ, ಪ್ರಜೆಗಳ ಪರಮಾಧಿಕಾರ, ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದಾದಿ ತಿಳಿಸಿದೆ.

ನಮ್ಮ ಸಂವಿಧಾನದ ಪೂರ್ವ ಪೀಠಿಕೆಯು ತುಂಬಾ ಅರ್ಥಗರ್ಭಿತವಾಗಿದ್ದು, 

ದೇಶದ ರಾಜಕೀಯ ವ್ಯವಸ್ಥೆಯ ಚಿತ್ರಣವನ್ನು ಚಿತ್ರಿಸುತ್ತದೆ.

ಸಂವಿಧಾನದ ಕೈ ದೀಪವಾಗಿದೆ.

ಇದನ್ನು ಕೆಲವರು 'ಸಂವಿಧಾನದ ಒಡವೆ' (Jewel) ಎಂದು ಬಣ್ಣಿಸಿದ್ದಾರೆ.

ಕೆ.ಎಂ. ಮುನ್ಛಿ 'ರಾಜಕೀಯ ಜಾತಕ' ಎಂದು ಕರೆದಿದ್ದಾರೆ.


ಸರಿಯಾದ ಉತ್ತರ: 2) ಜನವರಿ 22, 1947

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...